ಪೊಂಗಲ್: ಒಂದು ಹಬ್ಬ; ಒಂದು ಆಚರಣೆ! – Rosebazaar India

Watch us on Shark Tank!

ಪೊಂಗಲ್: ಒಂದು ಹಬ್ಬ; ಒಂದು ಆಚರಣೆ!

ಪೊಂಗಲ್: ಒಂದು ಹಬ್ಬ; ಒಂದು ಆಚರಣೆ!

ಅನುಷಾ ಎನ್ 

ಜನವರಿ ೧೬,೨೦೨೦ 

‘ಪೊಂಗಲ್’ ಎಂಬುದು ತಮಿಳು ಸಾಹಿತ್ಯದಿಂದ ಬಂದ ಪದವಾಗಿದ್ದು, ಅದು “ಕುದಿಸುವುದು” ಎಂದರ್ಥ. ಇದು ಸುಗ್ಗಿಯ ಹಬ್ಬವಾಗಿದ್ದು, ಅಕ್ಕಿ, ಕಬ್ಬು, ಅರಿಶಿನ ಇತ್ಯಾದಿಗಳ ಪ್ರಮುಖ ಬೆಳೆಗಳನ್ನು ಕೊಯ್ಲು ಮಾಡಿದ ನಂತರ ಸೌರ ವಿಷುವತ್ ಸಂಕ್ರಾಂತಿಯ ಸಮಯದಲ್ಲಿ ಜನವರಿ-ಫೆಬ್ರವರಿ (ಥಾಯ್) ತಿಂಗಳುಗಳಲ್ಲಿ ನಾಲ್ಕು ದಿನಗಳ ಕಾಲ ತಮಿಳುನಾಡಿನಲ್ಲಿ ಆಚರಿಸಲಾಗುತ್ತದೆ.

                                                 

ಪೊಂಗಲನ್ನು ನಾಲ್ಕು ದಿನಗಳವರೆಗೆ ಆಚರಿಸಲಾಗುತ್ತದೆ: ಭೋಗಿ ಪೊಂಗಲ್, ಸೂರ್ಯ ಪೊಂಗಲ್, ಮಾಟು ಪೊಂಗಲ್, ಕನುಮ ಪೊಂಗಲ್.

ಭೋಗಿ ಪೊಂಗಲ್- ಇದು ಹಬ್ಬದ ಮೊದಲನೇಯ ದಿನವಾಗಿದ್ದು, ಜನರು ಹಳೆಯ ವಸ್ತುಗಳನ್ನು ಉತ್ಸವದ ಬೆಂಕಿಯಲ್ಲಿ ತಿರಸ್ಕರಿಸುತ್ತಾರೆ ಮತ್ತು ಹೊಸ ಆಸ್ತಿ ಮತ್ತು ಬಟ್ಟೆಗಳೊಂದಿಗೆ ಆಚರಿಸುತ್ತಾರೆ. ಮನೆಗಳನ್ನು ಸ್ವಚ್ಚಗೊಳಿಸಿ ಅಲಂಕರಿಸಲಾಗುತ್ತದೆ ಮತ್ತು ಪ್ರಾರ್ಥನೆಯನ್ನು ಬಹಳ ನಂಬಿಕೆಯಿಂದ ಮಾಡಲಾಗುತ್ತದೆ. ಹಳ್ಳಿಗಳಲ್ಲಿ, ರೈತರು ತಮ್ಮ ಭೂಮಿಯನ್ನು ಫಲವತ್ತಾಗಿಸಲು ಆಶೀರ್ವದಿಸುತ್ತಾರೆ ಎಂಬ ನಂಬಿಕೆಯಿಂದ ಸಪ್ತ ಕನ್ನಿಮಾರ್ (೭ ಕನ್ಯೆಯ ದೇವತೆಗಳನ್ನು) ಪ್ರಾರ್ಥಿಸುತ್ತಾರೆ.

                                               

ಸೂರ್ಯ ಪೊಂಗಲ್- ಹಬ್ಬದ ಎರಡನೇ ದಿನವು ಚಳಿಗಾಲದ ಸುಗ್ಗಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ ಸೂರ್ಯ ಭಗವಂತನಿಗೆ ಸಮರ್ಪಿಸಲಾಗಿದೆ. ಈ ದಿನ, ಮಹಿಳೆಯರು ಉಡುಗೆ ತೊಟ್ಟು, ಒಟ್ಟಾಗಿ, ಪೊಂಗಲ್, ಸಿಹಿ ಖಾದ್ಯವನ್ನು ಹೂಮಾಲೆಗಳಿಂದ,ಒಲೆಯ ಬಳಿ ಕಬ್ಬಿನ ತೊಟ್ಟುಗಳಿಂದ ಅಲಂಕರಿಸಿದ ಮಣ್ಣಿನ ಪಾತ್ರೆಯಲ್ಲಿ ತಯಾರಿಸುತ್ತಾರೆ. ಮುಂದಿನ ವರ್ಷದಲ್ಲಿ ಹೆಚ್ಚಿನ ಅದೃಷ್ಟವನ್ನು ಸೂಚಿಸುವ ಈ  ಖಾದ್ಯವನ್ನು ಕುದಿಯಲು ಮತ್ತು ಉಕ್ಕಿ ಹರಿಯಲು ಬಿಡಲಾಗುತ್ತದೆ.

ಮಾಟು ಪೊಂಗಲ್- ಆಚರಣೆಯ ಈ ಮೂರನೇ ದಿನದಂದು ಹಳ್ಳಿಗಳಲ್ಲಿನ ದನಗಳನ್ನು ಸುಗ್ಗಿಯ ಕೃತಜ್ಞತೆಯ ಅಂಗವಾಗಿ ಹೂಮಾಲೆಗಳಿಂದ ಚಿತ್ರಿಸಲಾಗುತ್ತದೆ ಮತ್ತು ಕೊಂಬುಗಳಿಗೆ ಬಣ್ಣ ಹಚ್ಚಲಾಗುತ್ತದೆ.

ಕನುಮ ಪೊಂಗಲ್- ಇದು ಪೊಂಗಲ್ನ ಕೊನೆಯ ದಿನವಾಗಿದ್ದು, ಸಮುದಾಯವು ತಮ್ಮ ಬಾಂಧವ್ಯವನ್ನು ಬಲಪಡಿಸಲು ಭೇಟಿ ಮತ್ತು ಶುಭಾಶಯಗಳ ದಿನವಾಗಿದೆ.

ಆಧುನಿಕ-ದಿನದ ಕಾರ್ಯನಿರತ ಜೀವನದಲ್ಲಿ, ಜನರು ಒಂದೇ ದಿನದಲ್ಲಿ ಎಲ್ಲಾ ಆಚರಣೆಗಳನ್ನು ಆಚರಿಸುತ್ತಾರೆ. ಉತ್ಸವದ ಮತ್ತೊಂದು ಪ್ರಮುಖ ಮುಖ್ಯಾಂಶವೆಂದರೆ ಪ್ರವೇಶ ಸ್ಥಳಗಳು ಮತ್ತು ಮನೆಯ ಆವಾರಗಳನ್ನು ಹೂವು, ಜ್ಯಾಮಿತೀಯ ಮಾಧರಿಗಳಿಂದ ‘ಕೋಲಂ’ಗಳನ್ನು ಅಲಂಕರಿಸುತ್ತಾರೆ.

ನಿಮ್ಮ ಎಲ್ಲಾ ಹೂವಿನ ಅವಶ್ಯಕತೆಗಳಿಗಾಗಿ ಈ ಪೊಂಗಲ್ ಹಬ್ಬದ ನಿಮ್ಮ ಸಿದ್ಧತೆಗಳನ್ನು ಸುಲಭಗೊಳಿಸಿ! ಮತ್ತು ನಿಮ್ಮ ಕುಟುಂಬದೊಂದಿಗೆ ಅದ್ಭುತ ಹಬ್ಬದ ಸಮಯವನ್ನು ಆಚರಿಸಿ. ಪೊಂಗಲ್ ಹಬ್ಬದ ಶುಭಾಷಯಗಳು! :) ನಿಮ್ಮ ಎಲ್ಲಾ ಹೂವಿನ ಅವಶ್ಯ್ಕತೆಗಳನ್ನು ಪೋರೈಸಿಕೊಳ್ಳಲು ರೋಸ್ ಬಜಾರಿಗೆ ಬನ್ನಿ.